Friday, October 24, 2008

ಭಯಂಕರ

ಮೈಸೂರ್ ಇಂದ ಶ್ರೀರಂಗಪಟ್ಟಣದ ಕಡೆಗೆ ನಾನು ಮತ್ತೆ ನನ್ನ ಅಣ್ಣ ವಿಜಯ್ ಬೈಕ್ನಲ್ಲಿ ಸವಾರಿ... ೯ ಗಂಟೆ ಹೊತ್ತಿಗೆ ವಾಪಸ್ ಬರಬೇಕು ಅಂತ ೭ ಗಂಟೆಗೆ ಹೊರಟ್ವಿ... ನನಗೆ ಹಿಂದೆ ಕಣ್ಣು ಬಿಡಕ್ಕೆ ಆಗಬಾರದು ಅಷ್ಟು ವೇಗವಾಗಿ ಅಣ್ಣ ಓಡಿಸ್ದ... ಅಂತು ಅವನ ಇಚ್ಚೆಯಂತೆ ೨೦ ನಿಮ್ಷದಲ್ಲಿ ತಲ್ಪಿದ್ವಿ... ಮೊದ್ಲು ಕಾವೇರಿ ನದಿಯಲ್ಲಿ ಕೈಕಾಲ್ ತೊಳ್ದು ದೇವಿಯ ದರ್ಶನಕ್ಕೆ ಹೋಗೋಣ ಅಂತ ಹೊರಟ್ವಿ... ಅಲ್ಲಿ ಹೋಗ್ತಿದಂಗೆ ಭಯಂಕರ ಘಟನೆ ನೆನಪಿಗೆ ಬಂತು....
ಅವತ್ತು ನಮ್ಮಜ್ಜಿ ದೇವಸ್ಥಾನ ಪೂಜೆಗೆ ಕೊಟ್ಟಿದ್ರು... ನಮ್ಮ ಕುಟುಂಬದವರೆಲ್ಲ ಹೋಗಿದ್ವಿ... ನಮ್ಮಲ್ಲಿ ದೇವರ ಮೇಲೆ ಭಕ್ತಿ ಜಾಸ್ತಿನೆ ಅನ್ನಬೋದು... ನನಗೆ ಆಗ ೬ ರಿಂದ ೮ ವರ್ಷ ಅಷ್ಟೆ... ದೇವ್ರು ದಿಂಡ್ರು ಅಂದ್ರೆ ಏನು ಅಂತ ಗೊತಿರ್ಲಿಲ್ಲ... ನಮಗೆಲ್ಲ ನೀರಿನಲ್ಲಿ ಆಡೋದು ಬಿಟ್ರೆ ಇನ್ಯಾವ ಕೆಲಸಕ್ಕೂ ನಾಲಾಯಕ್ಕು...
ಅಂದು ಭಾನ್ವಾರ ಇರಬೇಕು ತುಂಬ ಜನ ಇದ್ರೂ... ನಾವು ನೀರನಲ್ಲಿ ಇಳ್ದು ಆಟ ಆಡ್ತಿದ್ವಿ... ನಂಪಕ್ಕ ಇನ್ನೊಂದು ಕುಟುಂಬದವರು ನೀರಿನಲ್ಲಿ ಇಳಿದಿದ್ರು ... ಅದ್ರಲ್ಲಿ ೨ ಗಂಡು ಹುಡುಗ್ರು ಮತ್ತೆ ಒಬ್ಳು ಹುಡುಗಿ ಆಡ್ತಿದ್ರು... ನಮ್ಮಿಂದ ಅವ್ರು ದೂರ ಹೋಗಿದಾರೆ ಅನ್ನೋದು ನಮ್ಮ ಗಮನಕ್ಕೆ ಬರ್ಲೇಯಿಲ್ಲ ... ಅಲ್ಲಿ ಸುಳಿ ಇದೆ ಅಂತ ಯಾರಿಗೂ ಗೊತ್ತಿಲ್ಲ... ಮೂವರು ಸುಳಿಲಿ ಸಿಕ್ಕೊಂಡಿದಾರೆ ಅದ್ನ ನೋಡಿ ಯಾರೋ ಕಿರ್ಚ್ಕೊಂಡು ಓಡಿಬಂದ್ರು... ನೀರಿನಲ್ಲಿ ಆಡ್ತಿದ್ದ ನಾವು ಎದ್ದೋ ಬಿದ್ದೋ ಆಚೆ ಬಂದ್ವಿ... ಮಕ್ಕಳ ತಾಯಿ "ಅಯ್ಯೋ, ಯಾರಾರು ಕಾಪಾಡಿ" ಅಂತ ಅಳು ಶುರುಮಾಡಿದ್ರು... ನಮಗೆಲ್ಲ ಎಂದಿಗೂ ಬರ್ದೆರೋ ಜೀವ ಭಯ ಅಂದು... ಅವ್ರು ಅಳೋದು ನೋಡಿ ನಾವೆಲ್ಲ ಜೋರಾಗಿ ಅಳ್ತಿದಿವಿ... ತಕ್ಷಣ ತೆಪ್ಪದವರು ಮಕ್ಳನ್ನ ಕಾಪಾಡಕ್ಕೆ ಹೊರಟ್ರು... ಅಲ್ಲಿ ಮಕ್ಕಳ ತಂದೆ ತಾಯಿನ ಸಮಾಧಾನ ಮಾಡಕ್ಕೆ ಅವರ ಜೊತೆ ಬಂದಿದ್ದ ಬಂಧುಗಳು ತುಂಬಾ ಪ್ರಯತ್ನ ಮಾಡ್ತಿದ್ರು ... ಸಮಾಧಾನದ ಮಾತುಗಳು ಮಕ್ಕಳ ತಂದೆ ತಾಯಿಯರ ಕಿವಿಗೆ ಬೀಳ್ತಿರ್ಲಿಲ್ಲ...
ಕೆಲವು ಗಂಟೆಗಳ ಪ್ರಯತ್ನಕ್ಕೆ ಒಬ್ಬ ಹುಡ್ಗ ಬದುಕಿ ಬಂದ... ಅವನ ಗೋಳು ಬೇಡವೇ ಬೇಡ.. ಈಗ ನೆನಿಸಿಕೊಂಡರು ಮೈಯೆಲ್ಲಾ ಜುಮ್ಮ್ ಅನ್ನತ್ತೆ... ಈಗಲೂ ಅವನ ಮಾತು ಕಿವಿಲಿ ಕೆಳಿಸ್ದಂಗೆ ಅನ್ಸತ್ತೆ... ನಮಗೆಲ್ಲ ಇವನು ಸಿಕ್ದಂಗೆ ಅವರಿಬ್ರು ಸಿಗ್ತಾರೆ ಅನ್ನೋ ನಂಬ್ಕೆ... ತೆಪ್ಪದವರ ಪ್ರಯತ್ನದ ಫಲಿತಾಂಶಕ್ಕಾಗಿ ಕಾಯ್ತಿದ್ವಿ... ಕೊನೆಗೂ ಮಕ್ಕಳು ಸಿಗ್ಲಿಲ್ಲ... ಇಬ್ರು ನೀರಿನಲ್ಲಿ ಕೊಚ್ಕೊಂಡ್ ಹೋಗಿದ್ರು... ಅವರಲ್ಲಿ ಒಬ್ಬ ಪಕ್ಕದ ಮನೆ ಹುಡುಗ ಅಂತ ಆಮೇಲೆ ತಿಳಿತು... ಅವತು ಯಾರಗೂ ಏನ್ ಮಾಡೋಕು ಹಿಂಸೆ... ದೇವಿಯ ದರ್ಶನನು ಮಾಡ್ದೆ ವಾಪಸ್ ಬಂದ್ವಿ...
ಈ ಘಟನೆ ಯೋಚಿಸ್ತಾ ನಿಂತಿದೆ ನನ್ನ ಅಣ್ಣ ಎಚ್ಚರ ಮಾಡಿಸ್ದ... ಕೈಕಾಲ್ ತೊಳ್ದು ದೇವಿಯ ದರ್ಶನಕ್ಕೆ ಹೋದ್ವಿ...

Thursday, October 23, 2008

ಇಟ್ಸ್ ದ ಟೈಮ್ ಟು ಡಿಸ್ಕೋ

ಸಂಜೆ ಸುಮಾರು .೩೦- ಗಂಟೆ ಇರಬೋದು... ಮನೆ ಹೊರಗೆ ದೊಡ್ದು ಗುಂಪು ಸೇರಿದೆ... ನಾವು ಆಕ್ಸಿಡೆಂಟ್ ಆಗಿರ್ಬೋದು ಅಂತ ಅಂದ್ಕೊಂಡ್ ಹೊರಗೆ ಹೋದ್ವಿ.. ಅಲ್ಲಿ ನೋಡಿದ್ರೆ ಬರಿ "ಹೋಂಡ ಅಕ್ಟಿವ" ಗಾಡಿ ಮಾತ್ರ ಇದೆ... ಕಪ್ಪೆ ಸತ್ ಬಿದ್ದಿದೆ... ಎಲ್ಲಾರು ಡಿಕ್ಕಿ ಕೆಳಗೆ ಇದೆ ಅಂತ ಕಿರ್ಚ್ತಿದಾರೆ... ನನಗೆ ಯಾವ್ದೋ ಪ್ರಾಣಿ ಒಳಗೆ ಸೇರಿದೆ ಅಂತ ತಿಳಿತು...
ಡಿಕ್ಕಿ ತೆಗಿದ್ರೆ "ನಾಗರ ಹಾವು " ಹೆಡೆ ಎತ್ತಿದೆ... ಎಲ್ಲಾರ್ಗು ಒಂದ್ ನಿಮಿಷ ಮಾತೆ ಹೊರಡ್ಲಿಲ್ಲ ... ದಂಗಾಗಿ ನಿಂತಿದ್ದಾರೆ....ಎಲ್ಲಾರು ಜೋರಾಗಿ " ಹಿಡಿಯಪ್ಪ ಬೇಗ " ಆಂತ ಕಿರ್ಚಿಕೊಂಡು ಓಡ್ತಿದಾರೆ... ನಮಗೆ ನಗು, ಹಾಗು ಮಜಾ...
ಹಾವ್ನ ಹಿಡ್ದು ಚಾವುಟಿ ತಿರ್ಗಿಸಿದ ಹಾಗೆ ಜೋರಾಗಿ ತಿರ್ಗಿಸ್ದ... ಎಲ್ಲಾರು ಭಯದಿಂದ "ನಿಧಾನಪ್ಪ , ಕೈಗೀ ಬಿಟ್ ಬಿಟ್ಟೀಯ " ಆಂತ ಆತಂಕದಿಂದ ಹೇಳ್ತಿದಾರೆ... ನಾವು ೧೭ ವರ್ಷಗಳಿಂದ ಇರೋದ್ರಿಂದ ನಮಗೆ ಸ್ವಲ್ಪ ಹಾವುಗೀವು ನೋಡಿ ಅಭ್ಯಾಸ ಇದೆ.. ನಮ್ಮ ಮನೆಗೂ ಬೇಕಾದಷ್ಟು ಸಲ ಭೇಟಿ ನೀಡಿದೆ... ಹಾವನ್ನ ತಿರ್ಗಿಸ್ ಬೇಕಾರೆ ಅಕಸ್ಮಾತು ಬಿಟ್ಟಿದ್ರೆ ಕಥೆನೇ ಬೇರೆ ಇರ್ತಿತ್ತು... ನಾವೆಲ್ಲ ಆಗ "ಇಟ್ಸ್ ಟೈಮ್ ಟು ಡಿಸ್ಕೋ" ಅಂತ ಹಾಡು ಹಾಡಬೇಕಿತ್ತು... ಬಿಡಬೇಕಿತ್ತುಆಗ ಮಜಾನೆ ಬೇರೆ ಇರೋದು...
ಅಂತು ಇಂತೂ ಹಾವನ್ನ ಚೀಲದ ಒಳಗೆ ಸೇರಿಸ್ದ ... ಎಲ್ಲಾದರು ದೂರ ಬಿಡು ಅಂತ ಹೇಳಿದ್ವಿ... ಎಲ್ಲಾರು ನೆಮ್ಮದಿಯ ಉಸಿರು ಬಿಟ್ರು... " ಮೊದ್ಲು ಇಲ್ಲಿಂದ ಜಾಗ ಖಾಲಿ ಮಾಡು" ಅಂತ ಹೇಳಿ ದುಡ್ಡು ಕೊಟ್ಟು ಕಳಸಿದರು...
ನಾನು " ಸಿನಿಮಾ ಮುಗಿತು ಮನೆಗೆ ಹೋಗಿ" ಅಂತ ಹಾಸ್ಯ ಮಾಡ್ದೆ... ನಗ್ತಾ ನಗ್ತಾ ಎಲ್ಲಾರು ತಮ ತಮ್ಮ ಮನೆಗೆ ಹೋದ್ರು... :)

Saturday, September 6, 2008

ಅವಳು


ಮನದ ಬಾಗಿಲ ತೆರೆದು

ಒಳಬಂದು ನಿಂತಿಹಳು..

ಮನೆಯನ್ನು ಬಿಟ್ಟು

ಹೇಗೆ ಬರಲೆಂದು ಯೋಚಿಸುವಳು..

ಕಾತುರದಿಂದ ನನ್ನನ್ನು ಬಂದು

ಸೇರಿಹಳು..

ನಾನಿರುವೆ ನಿನಗೆಂದು

ಯೋಚನೆಯ ಬಿಡು ಎಂದು ಹೀಳಿದೆನು..

"ಅಲ್ಲಿಯೂ ಬಿಡಲಾರೆ,

ಇಲ್ಲಿಯೂ ಇರಲಾರೆ" ಎಂದು

ದಿಕ್ಕುತೋಚದಂತೆ ನಿಂತಿಹಳು ಇಂದು..

ದಾರಿಯ ಹುಡುಕಲು ಹೋದವಳಂದು...

ಹುಡುಕಿದರು ಸಿಗದಂತೆ

ಕಣ್ಮರೆಯಾದಳಿಂದು.........