ಮರೆಯಲಾರೆ ನಾ
ಕಾಲೇಜಿನ ಮೊದಲ ದಿನವ
ಹುಡುಕಿದೆನು ಪರಿಚಯದ ಮುಖವ
ಸ್ನೇಹ ಬೆಳೆಸತೊಡಗಿದೆನು ಅಂದು
ಮಿತಿಯ ಮೀರಿತು ಇಂದು...
ಮರೆಯಲಾರೆ ನಾ
ಹಂಚಿದರೂ ಮಿಗುತ್ತಿತ್ತು
ನೂರಾರು ಚೂರು
ಈಗ ಹೇಳುವೆ
ನನಗೂ ಒಂದು ಚೂರು...
ಮರೆಯಲಾರೆ ನಾ
ಹಲವು ವಿಷಯವ ಹೇಳಲು
ಯಾರೂ ಇರಲಿಲ್ಲ ಅಂದು
ಈಗ ಯೋಚಿಸುವೆ
ಯಾರಿಗೆ ಹೇಳಲೆಂದು...
ಮರೆಯಲಾರೆ ನಾ
ಜೊತೆಗೂಡಿ ಹೊರಹೋಗಲು
ಹಿಂಜರಿಯುತ್ತಿದ್ದೆವು
ಈಗ ಹಕ್ಕಿಯಂತೆ ಗುಂಪಲ್ಲಿ
ಹಾರುವೆವು ನಾವು....
ಕಾಲೇಜು ಮುಗಿದಂತೆ
ದೂರವಾಗುವೆವು ನಾವು
ಎಲ್ಲವನು ಮರೆತು
ಹೇಗೆ ಬಾಳುವೆವೊ ನಾವು....
2 comments:
I m counting days dear... the best days of my life are almost coming to an end.... would miss all of u!
bhaavanegalannu chennaagi barediddiri..
Post a Comment