ಎಲ್ಲಾರ ಕಾಲೇಜಿನಲ್ಲಿ ನಡೆಯುವ ತರಹ ನಮ್ಮ ಕಾಲೇಜಿನಲ್ಲೂ "ಸಸ್ಪೆಂಷನ್" ಅನ್ನೋದು ನಡೀತು.. ಈ ದಿನದವರೆಗೂ ನಮಗೆ ನಾವು ಏಕೆ ಸಸ್ಪೆಂಡ್ ಆಗಿದ್ವಿ ಅಂತನೇ ಗೊತ್ತಿಲ್ಲ.. ಅವತ್ತು ನಮ್ಮ ಮೇಡಂ ರಜೆ ಹಾಕಿದ್ರು.. ನಮ್ಮ ಕಾಲೇಜಿನಲ್ಲಿ ಫ್ರೀ ಪೀರಿಯಡು ಅಂದ್ರೆ ಏನು ಅಂಥನೇ ಗೊತ್ತಿಲ್ಲ..ಯಾರೋ ಒಬ್ರು ಮೇಷ್ಟ್ರು ಬಂದ್ರು.. ಅವರು ಬಂದಿದ್ದು ನಮಗೆ ಗೊತ್ತಾಗ್ಲೆಯಿಲ್ಲಾ.. ನಾವೆಲ್ಲಾ ಜೋರಾಗಿ ಗಲಾಟೆ ಮಾಡ್ತಿದ್ವಿ.. ಯಾರ ಮೇಲೆ ಸಿಟ್ಟು ಇತ್ತೊ ಗೊತ್ತಿಲ್ಲಾ ಜೋರಾಗಿ ಕಿರ್ಚಿದ್ರು ಆಗ ಕಕ್ಷೆಯೊಳಗೆ ಯಾರೋ ಬಂದಿದಾರೆ ಅಂಥ ತಿಳಿತು.. ನಾವೆಲ್ಲಾ ದಂಗಾಗಿ ನೋಡ್ತಿದಿವಿ... ಅದೇ ಕೋಪದಲ್ಲಿ ನಮ್ಮ HODನ ಕರೆದು ಕೊಂಡು ಬಂದ್ರು.. ಯಾವತ್ತೂ ಕಾಣದೇಯಿರೋ HODನ ಅವತ್ತು ಕಂಡು ಎಲ್ಲಾರಿಗು ಆಶ್ಚರ್ಯ... ಕಾಲೇಜಿಗೆ ಸೇರ್ದಾಗಿಂದ HOD ಯಾರು ಅಂಥ ಯಾರಿಗು ಸರಿಯಾಗಿ ಗೊತ್ತಿರಲಿಲ್ಲಾ...ನೋಡಕ್ಕೆ ಸಣ್ಣದಾಗಿದ್ರು ಗಂಟ್ಲು ಜೋರು... ಕಕ್ಷೆಗೆ ಬಂದ ಮೇಲೆ ಏನಾದ್ರು ಮಾತಾಡಬೇಕಲ್ಲಾ ಪಾಪ "ಏನ್ ನಡಿತಿದೆ ಇಲ್ಲಿ??" ಅಂದ್ರು... 'ನಮಗೇ ಗೊತ್ತಿಲ್ಲಾ ಇನ್ನು ನಿಮಗೆ ಏನು ಹೇಳೋದು' -ಅಂದ್ಕೊಂಡ್ವಿ...ನಮ್ಮಿ೦ದ ಉತ್ತರ ಬರ್ಲಿಲ್ಲ ಅಂಥ ಒಂದೇ ಮಾತಲ್ಲಿ " ಯುವರ್ ಕ್ಲಾಸ್ ಇಸ್ ಸಸ್ಪೆಂಡೆಡ್" ಅಂದಿದ್ದೆ ತಡ ನಾವೆಲ್ಲಾ ಮನೆಗೆ ಪರಾರಿ... ಅದೇನೋ ಹೇಳ್ತಾರಲ್ಲ 'ರೋಗಿ ಬಯಸಿದ್ದು ಹಾಲು ಅನ್ನ ಡಾಕ್ಟ್ರು ಹೇಳಿದ್ದು ಹಾಲು ಆನ್ನ'..ನಮಗೂ ಕಾಲೇಜಿಗೆ ಹೋಗಿ ಹೋಗಿ ನಮಗೂ ಬೇಜಾರಾಗಿತ್ತು... ನಮ್ಮ ಮೇಷ್ಟ್ರುಗಳಿಗೂ ಸ್ವಲ್ಪ ಆರಾಮ ಸಿಗ್ಲಿ ಅಂಥ ನಾವೆ ೨ ದಿನ ರಜೆ ತೊಗೊಂಡ್ವಿ... ಮನೆಯಲ್ಲಿ ಎಲ್ಲರಿಗು "ನಾವೆಲ್ಲಾ ಸಸ್ಪೆಂಡ್ ಆದ್ವಿ" ಅಂಥ ಹೆಮ್ಮೆಯಿಂದ ಹೇಳ್ಕೊಂಡು ತಿರಗಾಡ್ತಿದ್ವಿ... ನಾವು ೩ನೇ ದಿನ ಸರಿ ಹೋಗತ್ತೆ ಅಂಥ ಹೊದ್ವಿ ಒಂದು ಪತ್ರ ಬರೆದು ಕ್ಷಮೆ ಕೇಳಿ ಅಂದ್ರು... ಮನೇಲಿ ಗೊತ್ತಾದ್ರೆ ಕಷ್ಟಾ ಅಂಥ ಅಂದ್ಕೊಂಡು ಒಂದು ಪತ್ರ ಬರೆದ್ವಿ... HOD - " ಮೇಷ್ಟ್ರು ಹತ್ರ ಹೋಗಿ ಕ್ಷಮೆ ಕೇಳಿ ಆ ಪತ್ರದ ಮೇಲೆ ಸಹಿ ಹಾಕಿಸಿಕೊಂಡು ಬನ್ನಿ ಆ ಮೇಲೆ ನಾನು ಸಹಿ ಮಾಡ್ತಿನಿ" ಅಂದ್ರು... ಕೆಲವೊಬ್ಬರು ಹೋದ್ರು ಆ ಮೇಷ್ಟ್ರುನ ಹುಡುಕೊಕ್ಕೆ..ಎಲ್ಲೂ ಸಿಗ್ಲಿಲ್ಲಾ... ಸುಸ್ತಾಗಿ ಅವತ್ತು ನಾವೆ ರಜೆ ತೊಗೊಂಡು ಮನೆಗೆ ಹೋಗಿ ಸುದಾರಿಸ್ಕೊಂಡ್ವಿ... ೪ನೇ ದಿನ ಯಾರಿಗೂ ಆ ಮೇಷ್ಟ್ರುನ ಹುಡುಕೋಕ್ಕೂ ಸಹನೆ ಇರಲಿಲ್ಲಾ... ಹೋಗ್ಲಿ ಕಚೇರಿಯಲ್ಲಿ ವಿಚಾರಿಸಿ ನೋಡೊಣ ಅಂಥ ಹೋಗಿ ಕೇಳಿದ್ರೆ -" ಆ ಮೇಷ್ಟ್ರು ಕಾಲೇಜ್ನ ಬಿಟ್ಟು ೨ ದಿನ ಆಯಿತು ಅವರನ್ನ ಎಲ್ಲಿ ಹುಡುಕ್ತಿರಾ???" ಅಂದ್ರು....
No comments:
Post a Comment