Wednesday, March 31, 2010

ನನ್ನ ಪ್ರೀತಿಯ ಹೂವೆ

ಹಾದಿಯಲ್ಲಿ ಒಂದು ಹೂವ
ಕಂಡ ಕ್ಷಣವೆ ನೆನಪುಕಾಡಿ
ಕೊಡಲೆಬೇಕು ಅವಳಿಗೊಂದು
ಇಂಥ ಕುಸುಮವ!!

ಅವಳ ಭಾವಗಳೊಡನೆ ಆಡಿ
ಪುಳಕಗೊಳ್ಳೊ ಮನವ ಕಾಡಿ
ಹೂವಿನಂತೆ ಅರಳುವುದನ್ನು
ನೋಡ ಬಯಸುವೆ!!

ನಾನು ಕೊಟ್ಟ ಹೂವ ಹಿಡಿದು
ಕನಸೊ ನನಸೊ ತಿಳಿಯದಂತೆ
ಸಂತಸವ ತೋರಲಾರದಂತೆ
ಅಚ್ಚರಿಯಿಂದ ನೋಡಿದಳು!!

ಹೂವು ಕೊಡಲು ಅವಳಿಗೊಂದು
ನಗುವ ನೋಡ ಬಯಸಿದಂತೆ
ಅವಳ ಮೊಗವ ನೋಡಿದೊಡನೆ
ನನ್ನ ಮನವು ಕುಣಿಯಿತು!!

ನಮ್ಮ ನಗುವ ಮುಖವ ನೋಡಿ
ತಾನು ಕಾರಣವೆಂದು ತಿಳಿದು
ಕೆಂಪು ಬಣ್ಣ ಏರಿಸುತ್ತ
ಹೂವು ಖುಷಿಯ ತೋರಿತು!!

No comments: