ನೋಟದಲ್ಲೇ ಸೆಳೆದೆ ನನ್ನ ಮನಸ್ಸನ್ನು ನೀ
ಮಾತಿನಲ್ಲಿ ಮರೆಸಿದೆ ನನ್ನನ್ನು ನೀ
ತಿಳಿಯದೆ ಕದ್ದೆ ನನ್ನ ಹೃದಯವನ್ನು ನೀ
ಇನ್ನೇನು ಮೋಡಿ ಮಾಡುವೆ ನನ್ನ ಮೇಲೆ ನೀ !!
ಆಸೆಯ ಮಳೆಯಲ್ಲಿ ಕುಣಿದಾಡಿದೆ ಅಂದು
ಕಳೆದು ಹೋದೆ ಕನಸಿನ ಲೋಕದಲ್ಲಿ ಇಂದು
ಹೇಳಲು ಬಯಸಿದೆ " ನಾ ನಿನ್ನವಳು" ಎಂದೆಂದು
ನನ್ನನ್ನು ತಿಳಿಯುವೆಯ ನೀ ಎಂದು??
1 comment:
ನಿನ್ನನ್ನು ತನ್ನವಳೆಂದು ತಿಳಿಯದಿದ್ದರೆ ಅವನಿಗೇ ನಷ್ಟ
ಯಾಕಂದ್ರೆ ನಿನ್ನಷ್ಟು ಅವನನ್ನು ಪ್ರೀತಿಸುವವಳು ಅವನಿಗೆ ಸಿಗುವುದು ಕಷ್ಟ...
ಆಸೆಯ ಮಳೆಯೇ ಸುರಿಯದಿದ್ದರೂ ಮನ ತಣಿಸೋ ಸೋನೆಯಾದರೂ ಇರಲಿ
ಕನಸಿನ ಹೊಸ ಲೋಕದ ಪ್ರತಿ ಹಾದಿಯೂ ಪರಿಚಿತವಾಗಲಿ
ಮೋಡಿ ಮಾಡಲಿನ್ನೇನಿದೆ ಅವನೇ ಸಿಕ್ಕಿಬಿದ್ದಿರುವನಲ್ಲಾ ನಿನ್ನ ಮಾಯೆಯೊಳಗೆ
ಹುಡುಕುತ್ತಿರುವನು ಅವನು ಬಹುಶಃ ತನ್ನನ್ನು ನಿನ್ನ ಹೃದಯದೊಳಗೆ
ಮಾತು ಮಾತಲ್ಲೆ ಮಾತು ಮರೆಸಿದ್ದು ಸಾಕಿನ್ನು
ಕಣ್ಣೋಟ ಬೆರೆತಾಯ್ತಲ್ಲ ಭಾವನೆಗಳ ಹಂಚಿಕೊಳ್ಳಲು ತಡವೇಕಿನ್ನು
Post a Comment