ಡಿಕ್ಕಿ ತೆಗಿದ್ರೆ "ನಾಗರ ಹಾವು " ಹೆಡೆ ಎತ್ತಿದೆ... ಎಲ್ಲಾರ್ಗು ಒಂದ್ ನಿಮಿಷ ಮಾತೆ ಹೊರಡ್ಲಿಲ್ಲ ... ದಂಗಾಗಿ ನಿಂತಿದ್ದಾರೆ....ಎಲ್ಲಾರು ಜೋರಾಗಿ " ಹಿಡಿಯಪ್ಪ ಬೇಗ " ಆಂತ ಕಿರ್ಚಿಕೊಂಡು ಓಡ್ತಿದಾರೆ... ನಮಗೆ ನಗು, ಹಾಗು ಮಜಾ...
ಹಾವ್ನ ಹಿಡ್ದು ಚಾವುಟಿ ತಿರ್ಗಿಸಿದ ಹಾಗೆ ಜೋರಾಗಿ ತಿರ್ಗಿಸ್ದ... ಎಲ್ಲಾರು ಭಯದಿಂದ "ನಿಧಾನಪ್ಪ , ಕೈಗೀ ಬಿಟ್ ಬಿಟ್ಟೀಯ " ಆಂತ ಆತಂಕದಿಂದ ಹೇಳ್ತಿದಾರೆ... ನಾವು ೧೭ ವರ್ಷಗಳಿಂದ ಇರೋದ್ರಿಂದ ನಮಗೆ ಸ್ವಲ್ಪ ಹಾವುಗೀವು ನೋಡಿ ಅಭ್ಯಾಸ ಇದೆ.. ನಮ್ಮ ಮನೆಗೂ ಬೇಕಾದಷ್ಟು ಸಲ ಭೇಟಿ ನೀಡಿದೆ... ಹಾವನ್ನ ತಿರ್ಗಿಸ್ ಬೇಕಾರೆ ಅಕಸ್ಮಾತು ಬಿಟ್ಟಿದ್ರೆ ಕಥೆನೇ ಬೇರೆ ಇರ್ತಿತ್ತು... ನಾವೆಲ್ಲ ಆಗ "ಇಟ್ಸ್ ದ ಟೈಮ್ ಟು ಡಿಸ್ಕೋ" ಅಂತ ಹಾಡು ಹಾಡಬೇಕಿತ್ತು... ಬಿಡಬೇಕಿತ್ತುಆಗ ಮಜಾನೆ ಬೇರೆ ಇರೋದು...
ಅಂತು ಇಂತೂ ಹಾವನ್ನ ಚೀಲದ ಒಳಗೆ ಸೇರಿಸ್ದ ... ಎಲ್ಲಾದರು ದೂರ ಬಿಡು ಅಂತ ಹೇಳಿದ್ವಿ... ಎಲ್ಲಾರು ನೆಮ್ಮದಿಯ ಉಸಿರು ಬಿಟ್ರು... " ಮೊದ್ಲು ಇಲ್ಲಿಂದ ಜಾಗ ಖಾಲಿ ಮಾಡು" ಅಂತ ಹೇಳಿ ದುಡ್ಡು ಕೊಟ್ಟು ಕಳಸಿದರು...ನಾನು " ಸಿನಿಮಾ ಮುಗಿತು ಮನೆಗೆ ಹೋಗಿ" ಅಂತ ಹಾಸ್ಯ ಮಾಡ್ದೆ... ನಗ್ತಾ ನಗ್ತಾ ಎಲ್ಲಾರು ತಮ ತಮ್ಮ ಮನೆಗೆ ಹೋದ್ರು... :)
3 comments:
gud one dear
a serious incident described in a funny way!!!!
nice :)
haha a funny
Post a Comment